Breaking News
Home / कर्नाटक / ಲೋಕಸಭಾ ಚುನಾವಣಾ ಗುಂಗಿನಲ್ಲಿ ಮತದಾರರನ್ನು ಮರೆತ ರಾಜಕೀಯ ಮುಖಂಡರು

ಲೋಕಸಭಾ ಚುನಾವಣಾ ಗುಂಗಿನಲ್ಲಿ ಮತದಾರರನ್ನು ಮರೆತ ರಾಜಕೀಯ ಮುಖಂಡರು

ಚಿಕ್ಕೋಡಿ:- ಜನಪ್ರತಿನಿಧಿಗಳು ಈಗ ಲೋಕಸಭಾ ಚುನಾವಣೆಯ ಗುಂಗಿನಲ್ಲಿದ್ದಾರೆ ಆದರೆ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದೂಧಗಂಗಾ ವೇದಗಂಗಾ ಪಂಚಗಂಗಾ ಚಿಕೋತ್ರಾ ಮತ್ತು ಕೃಷ್ಣಾ ನದಿ ತೀರದ ಜನರು ಮಾತ್ರ ಕುಡಿಯಲು ನೀರಿಲ್ಲದೆ ಪರಿತಪಿಸುವಂತಾಗಿದೆ ಮೊದಲೆ ನೆತ್ತಿ ಸುಡುವ ಬಿಸಿಲು ಈ ಸಂದರ್ಭದಲ್ಲಿ ನದಿ ಬತ್ತಿ ಹೋಗಿದೆ ಜನಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ಸಂಕಷ್ಟದ ಸ್ಥಿತಿಯಲ್ಲಿದ್ದರೂ ಜನಪ್ರತಿನಿಧಿಗಳು ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ .

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜನಪ್ರತಿನಿಧಿಗಳು ಪೈಪೋಟಿಗೆ ಬಿದ್ದವರಂತೆ ಕೃಷ್ಣ ನದಿಗೆ ನೀರು ಬಿಡಲು ಮನವಿ ಮಾಡಿದ್ದು ಇನ್ನೆನ್ನು ನೀರು ಬಂತು ಎನ್ನುವ ತರಹ ಹೇಳಿಕೆಗಳನ್ನು ಕೊಡುತ್ತದ್ದಾರೆ ಆದರೆ ವಾಟ್ಸ್, ಫೆಸಬುಕ್‍ನಲ್ಲಿ ಮಾತ್ರ ನೀರು ಹರಿಯುತ್ತಿದೆ ಎಂದು ಸುಳು ಸುದ್ದಿ ಹರಡಿವೆ ಆದರೆ ನಿಜವಾಗಿಯೂ ನದಿಯಲ್ಲಿ ನೀರು ಹರಿಯದೆ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ 1 ವಾರದ ಹಿಂದೆ ಚಿಕ್ಕೋಡಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆಯವರ ಪ್ರಚಾರ ಸಭೆಯಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರು ಮಾತನಾಡುವ ಸಂದರ್ಭದಲ್ಲಿ ಈ ಭಾಗದ ಜಿವನಾಡಿ ಕೃóಷ್ಣೆ ಬತ್ತಿ ಹೊಗಿದ್ದು ಜನ ಜಾನುವಾರುಗಳಿಗೆ ಕುಡಿಯುಲು ನೀರಿನ ಸಮಸ್ಯೆ ಉಂಟಾಗಿದೆ ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ ಶಾ ಇವರಿಗೆ ಮನವರಿಕೆ ಮಾಡಿ ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ 2 ಟಿಎಂಸಿ ನೀರನ್ನು ಬಿಡುವಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೆಂದ್ರ ಪಡ್ನವಿಸ್ ಅವರಿಗೆ ಹೇಳಿದಾರೆ ಹೀಗಾಗಿ ಶಿಘ್ರವೇ ನದಿಗೆ ನೀರು ಬರಲಿದೆ ಎಂದು ತಮ್ಮ ಬಣ್ಣದ ಮಾತುಗಳಿಂದ ಜನರನ್ನು ಮರಳು ಮಾಡಿದರು.

ಒಂದು ವಾರ ಕಳೆದರೂ ನೀರು ಮಾತ್ರ ಇನ್ನೂವರೆಗೆ ಬಂದಿಲ್ಲ .

ಹುಸಿ ಭರವಸೆ ಇನ್ನೂ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಗಿರುವ ಪ್ರಕಾಶ ಹುಕ್ಕೇರಿ ಅವರು ತಮ್ಮ ಪ್ರಚಾರಾರ್ಥವಾಗಿ ಉಗಾರಕ್ಕೆ ಆಗಮಿಸಿದಾಗ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜರಕಿಹೋಳಿಯವರ ಸಮ್ಮುಖದಲ್ಲಿ ತಾವು ಹಾಗೂ ಸಚಿವರು ಕೂಡಿಕೊಂಡು ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತರ ಸಭೆ ಕಡೆದು ಹಿಡಕಲ್ ಜಲಾಶಯದಿಂದ ನೀರು ಬಿಡಿಸುವ ಭರವಸೆ ನೀಡಿದ್ದರು ಹಿಡಕಲ್ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದ ನೀರು ಲಭ್ಯವಿದ್ದು ಕಾಲುವೆಗಳ ಮುಖಾಂತರ ಕೃಷ್ಣಾ ನದಿಗೆ 2ಟಿಎಂಸಿ ನೀರು ಬಿಡಿಸುವ ಭರವಸೆ ನೀಡಿದ್ದರು 15 ದಿನಗಳಲ್ಲಿ ನೀರು ಬಂದಿದೆ ನಾಯಕರ ಹೇಳಿಕೆಗೂ ಜನರ ಸಂತೋಷ ವ್ಯಕ್ತಪಡಿಸಿದ್ದರು.

ಬಾಕ್ಸ್

ಕಾಂಗ್ರೆಸ್ ಬಿಜೆಪಿಯ ಎರಡೂ ಪಕ್ಷಗಳ ಮುಖಂಡರು ಹಾಗೂ ಬೆಂಬಲಿಗರು ಕೃಷ್ಣೆಗೆ ನೀರು ಬಿಡಲಾಗಿದೆ ಎಂದು ತಮ್ಮ ನಾಯಕರುಗಳ ಹೆಸರು ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ ವಾಟ್ಸ್ ಆಪ್ ಹಾಗೂ ಫೆಸಬುಕ್‍ನಲ್ಲಿ ನೀರು ಬಂದಿದೆ ಹೊರತು ಕೃಷ್ಣಾ ನದಿಯಲ್ಲಿ ಬಂದಿಲ್ಲ ಇದು ನದಿ ದಡದ ನಮ್ಮ ದೌರ್ಭಾಗ್ಯ

ಶ್ರೀಶೈಲ ಕೋಠಿವಾಲೆ

ಮಾಂಜರಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳು ತಮ್ಮ ಚುನಾವಣೆಗೆ ಎಷ್ಟು ಮಹತ್ವ ಕೊಡುತ್ತಿದ್ದರೋ ಅಷ್ಟನ್ನು ಕೃಷ್ಣೆ ನದಿ ತೀರದ ಜನರ ಸಮಸ್ಯೆಗಳಿಗೂ ನೀಡಬೇಕು ಕುಡಿಯಲು ನಿರಿಲ್ಲದೆ ಜನಜಾನುವಾರುಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಸುಳ್ಳು ಭರವಸೆ ನೀಡದೆ ಪ್ರಾಮಾಣಿಕವಾಗಿ ಕೆಲಸ ಮಾಡಿ .

ಬಾಬಾಸಾಹೇಬ ಸದಲಗೆ

ನಸಲಾಪುರ

ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಅಥಣಿ, ಚಿಕ್ಕೋಡಿ, ರಾಯಬಾಗ, ಕಾಗವಾಡ ಹಾಗೂ ಜಮಖಂಡಿ ತಾಲೂಕಿನ ಲಕ್ಷಾಂತರ ಜನ ಹಾಗೂ ಜಾನುವಾರುಗಿಗೆ ಕೃಷ್ಣೆ ಜೀವಜಲವಾಗಿದ್ದಾಳೆ ಬತ್ತಿ ಹೋಗಿರುವುದರಿಂದ ಜನರಿಗೆ ನೀರಿ ಸಮಸ್ಯೆಯಾಗಿದ್ದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ನದಿಗೆ ನಿರು ಬಿಡಿಸದೆ ಹೊದಲ್ಲಿ ಏ. 23 ರಂದು ನಡೆಯಲಿರುಬ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸಲು ಈ ಬಾಗದ ಜನರು ಚಿಂತನೆ ನಡೆಸಿದ್ದಾರೆ .

ಫೋಟೋ: 13ಮಾಂಜರಿ2

ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿ ಹೋಗಿರುವ ನದಿ ಪಾತ್ರದಲ್ಲಿ ನೀರಿಗಾಗಿ ರೈತ ತನ್ನ ಜಾನುವಾರಗಳ ಜೊತೆ ಅಲೆದಾಡುವ ದೃಶ್ಯ.

13ಮಾಂಜರಿ3

ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಕೃಷ್ಣಾ ನದಿ ಪಾತ್ರದಲ್ಲಿ ತೆಗ್ಗನ್ನು ಅಗೆದು ಕುಡಿಯುವ ನೀರು ಸಂಗ್ರಹಿಸುವಾಗ ಮಹಿಳೆಯರು .

About Mohan Bhowmik

Check Also

प्रधानमंत्री बिहार के अररिया मे गरजे

अररिया, 20 अप्रैल (आरएनआई)- प्रधानमंत्री नरेंद्र मोदी ने आज बिहार के अररिया में एक बार …

Leave a Reply

Your email address will not be published. Required fields are marked *